Wednesday, September 10, 2008

ಮಡದಿ ಎಂಬೋ ಮಡದಿಯ ಮಧುರ ನೆನಪುಗಳಲ್ಲಿ ಬರೆದ ಹಾಡು....

ಜೋಗಿ ಚಿತ್ರದ "ಬೇಡುವನು ವರವನ್ನು" ಹಾಡಿನ ರಾಗದಲ್ಲಿ

ಮದುವೆಯಲಿ ವಧುವಾಗಿ
ಮದುಮಗನ ಜೊತೆಯಾಗಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ

ತಾನು ಹುಟ್ಟಿದ ಆಡಿ ಬೆಳೆದ
ತನ್ನ ಊರ ತನ ಜನರ ತೊರಿತಾಳೋ
ತಂದೆ ಪ್ರೀತಿಯ ತಾಯಿ ಮಮತೆಯ
ಅತ್ತೆ ಮಾವನಲ್ಲರಸಿ ಬರುತಾಳೋ
ಆ ಹೆಣ್ಣೇ ಸತಿಯೋ
ಕೇಳಯ್ಯ ಪತಿಯೋ
ನಮಿಸಯ್ಯ ಆ ಜೀವವ
ನಮಿಸಯ್ಯ ಆ ಜೀವವ

ಮದುವೆಯಲಿ ವಧುವಾಗಿ
ಮದುಮಗನ ಜೊತೆಯಾಗಿ
ಸಪ್ತಪದಿ ತುಳಿವವಳೇ ಮಡದಿ


ಆ ಕಣ್ಣಪ್ಪ ತನ್ನ ದೈವಕೆ
ಕಣ್ಣೇ ಅರ್ಪಿಸಿ ತಾನು ಅಮರಾದ
ತನ್ನ ಪತಿಯ ಪತಿ ಮನೆಯ
ಕಣ್ಣೇ ತಾನಾಗಿ ಸತಿ ಕಾಯುತಾಳೋ
ಅಹಾ ಎಂತ ಹೆಣ್ಣೋ
ಪತಿ ಮನೆಯ ಕಣ್ಣೋ
ಪೂಜಿಸಯ್ಯ ಆ ಕಣ್ಣನು
ಅಯ್ಯ ಪೂಜಿಸಯ್ಯ ಆ ಹೆಣ್ಣನು

ಮದುವೆಯಲಿ ವಧುವಾಗಿ
ಮದುಮಗನ ಜೊತೆಯಾಗಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ