Tuesday, October 7, 2008

ಚಂದದ ಚಂದನ ಚೆಲುವೆಯ ಚೆಲುವನ್ನು ನೆನೆಯುತ್ತ ಬರೆದ ಹಾಡು

ಆ ಹುಣ್ಣಿಮೆ ಅಂದದಲಿ
ಮಿಂದ ಚಂದದ ಚಂದನ ಗೊಂಬೆನಾ
ನೀ ಚಂದದ ಚಂದನ ಗೊಂಬೆನಾ
ಈ ನನ್ನೆದೆ ಅಂಗಳದಿ
ರಂಗೋಲಿ ಹಾಕಿದ ರಂಬೇನಾ
ರಂಗನ್ನೇ ಚೆಲ್ಲಿದ ರಂಗೀನಾ
ಒಂದು ಸುಂದರ ತೋಟದಲಿ
ನಾ ದುಂಬಿ ಆದ್ರೆ ಹೂವು ನೀನೇನೆ
ನಾ ಬಳ್ಳಿ ಆದ್ರೆ ಮರವು ನೀನೇನೆ

ಕಳ್ಳ ಪೋಲೀಸು ಎಂಬೋ ಆಟದಲಿ
ನನ್ನ ಹೃದಯ ಕದ್ದ ಕಳ್ಳಿ ನೀನಾ
ಕಳ್ಳನ ಹಿಡಿಯೋ ಪೋಲೀಸ್ ನಾನಾ
ಕುಂಟೆಬಿಲ್ಲೆ ಎಂಬೋ ಆಟದಲಿ
ಘಲ್ ಎನುತ ಕುಂಟೋ ಹುಡುಗಿ ನೀನಾ
ನಿನ್ನನು ತಾಗೋ ಬಿಲ್ಲೆ ನಾನಾ

ಇಂಥ ಪ್ರಶ್ನೆಗಳ ಸುಳಿಯಲ್ಲಿ ಮುಳುಗಿ ಮುಳುಗಿ ಏಳುತಿರುವೆ
ನನ್ನ ತೇಲಿಸೋ ಗರಿಕೆ ನೀನಾಗೆ ಚೆಲುವೆ


ಆ ಆಗಸ ಎಂಬೋ ಊರಿನಲ್ಲಿ
ಮಿರ ಮಿರನೆ ಮಿನುಗೋ ಚುಕ್ಕಿ ನೀನಾ
ಚುಕ್ಕಿಯ ಅಪ್ಪಿರೋ ಕಿರಣ ನಾನಾ
ಈ ಮನಸು ಎಂಬೋ ಊರಿನಲ್ಲಿ
ಢವ ಢವ ಅನುವ ಹೃದಯ ನಾನಾ
ಅದರಲಿ ಇರುವ ಪ್ರೀತಿ ನೀನಾ

ಇಂಥ ಪ್ರಶ್ನೆಗಳ ಸುಳಿಯಲ್ಲಿ ಮುಳುಗಿ ಮುಳುಗಿ ಏಳುತಿರುವೆ
ನನ್ನ ತೇಲಿಸೋ ಗರಿಕೆ ನೀನಾಗೆ ಚೆಲುವೆ