Wednesday, September 10, 2008

ಮಡದಿ ಎಂಬೋ ಮಡದಿಯ ಮಧುರ ನೆನಪುಗಳಲ್ಲಿ ಬರೆದ ಹಾಡು....

ಜೋಗಿ ಚಿತ್ರದ "ಬೇಡುವನು ವರವನ್ನು" ಹಾಡಿನ ರಾಗದಲ್ಲಿ

ಮದುವೆಯಲಿ ವಧುವಾಗಿ
ಮದುಮಗನ ಜೊತೆಯಾಗಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ

ತಾನು ಹುಟ್ಟಿದ ಆಡಿ ಬೆಳೆದ
ತನ್ನ ಊರ ತನ ಜನರ ತೊರಿತಾಳೋ
ತಂದೆ ಪ್ರೀತಿಯ ತಾಯಿ ಮಮತೆಯ
ಅತ್ತೆ ಮಾವನಲ್ಲರಸಿ ಬರುತಾಳೋ
ಆ ಹೆಣ್ಣೇ ಸತಿಯೋ
ಕೇಳಯ್ಯ ಪತಿಯೋ
ನಮಿಸಯ್ಯ ಆ ಜೀವವ
ನಮಿಸಯ್ಯ ಆ ಜೀವವ

ಮದುವೆಯಲಿ ವಧುವಾಗಿ
ಮದುಮಗನ ಜೊತೆಯಾಗಿ
ಸಪ್ತಪದಿ ತುಳಿವವಳೇ ಮಡದಿ


ಆ ಕಣ್ಣಪ್ಪ ತನ್ನ ದೈವಕೆ
ಕಣ್ಣೇ ಅರ್ಪಿಸಿ ತಾನು ಅಮರಾದ
ತನ್ನ ಪತಿಯ ಪತಿ ಮನೆಯ
ಕಣ್ಣೇ ತಾನಾಗಿ ಸತಿ ಕಾಯುತಾಳೋ
ಅಹಾ ಎಂತ ಹೆಣ್ಣೋ
ಪತಿ ಮನೆಯ ಕಣ್ಣೋ
ಪೂಜಿಸಯ್ಯ ಆ ಕಣ್ಣನು
ಅಯ್ಯ ಪೂಜಿಸಯ್ಯ ಆ ಹೆಣ್ಣನು

ಮದುವೆಯಲಿ ವಧುವಾಗಿ
ಮದುಮಗನ ಜೊತೆಯಾಗಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ
ಸಪ್ತಪದಿ ತುಳಿವವಳೇ ಮಡದಿ

Sunday, February 17, 2008

ಮಳೆಯಲ್ಲಿ ನೆನೆದ ಮನದಲ್ಲಿ ಮೂಡಿದ ಹಾಡು

ಆ ಹಾಡಿನ ರಾಗ ನನದೆ.. ಯಾವುದೇ ಗೀತೆಯ ರಾಗ ಇದಕ್ಕಿಲ್ಲ..

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ
ಮೈ ರೋಮವ ಪುಳಕಿಸೋ ನಿನ್ನಯ ಮಾಯೆ
ತಂದಿತು ನನ್ನಲಿ ಹೊಸ ತರ ಛಾಯೆ

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ

ಮುಂಗಾರಲ್ಲದ ದಿನಗಳಲ್ಲಿ
ಮುಸ್ಸಂಜೆಯ ಈ ಹೊತ್ತಿನಲ್ಲಿ
ಕುಣಿಯುತ್ತಿರುವ ನನ್ನ ಮನಸಿನಲ್ಲಿ
ಹಾಡುತ್ತಿರುವೆ ನೀ ಹನಿಯ ಚೆಲ್ಲಿ
ಅದು ಏನು ಅರಿಯೆ ನಿನ್ನ ಮಾಯೆ
ತುಂತುರು ಮಳೆ ರಾಯ
ನೀ ಮಾಡದಿರು ಗಾಯ

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ

ಹಸಿರು ಮರದ ಎಲೆಯಂಚಿನಲ್ಲಿ
ನಿನ್ನ ಹನಿಯ ರಂಗವಲ್ಲಿ
ಅದನು ವರ್ಣಿಸೋ ಪದಗಳೆಲ್ಲಿ
ಹುಡುಕುತಿರುವೆ ವ್ಯಾಕರಣದಲ್ಲಿ
ಮನಸಲ್ಲಿ ಸಂತಸ ಚಿಗುರು ಹೊಡೆದಿದೆ
ಅದನು ಬೆಳೆಸಯ್ಯ
ಅಳಿಸದಿರು ಮಾರಾಯ

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ

Sunday, February 10, 2008

ನನ್ನಲಿ ನಾನಿಲ್ಲದೆ ಬರೆದ ಹಾಡು

ಹಿಂದಿಯ ಅವರಪನ್ ಚಿತ್ರದ "ಸ್ಟಾರ್ ಮಾಹಿಯ" ರಾಗದಲ್ಲಿ...


ನಾನು ನನ್ನಲ್ಲಿ ಇಲ್ಲ ಅಂತು
ನೀನೇನೆ ಎಲ್ಲ ಅಂತು
ನನ್ ಹೃದಯ
ಕೊಡ್ತಿಯೇನೆ ನಿನ್ ಹೃದಯ...!!

ನನ್ನ ಮನಸಲ್ಲು ನೀನೆ ಇರುವೆ
ಎಲ್ಲೋದ್ರು ಅಲ್ಲೇ ಬರುವೆ
ಹೇಯ್ ಸೋನಿಯಾ
ನನ್ನ್ಯಾಕೆ ನೀನು ಹೀಗ್ ಕಾಡ್ತ್ಹಿಯ..??

ನಿನ್ನನ್ನು ನೋಡೋ ಮೊದಲು ನಾ ನಾನಾಗಿದ್ದೆ
ಈಗೇಕೋ ನನ್ನಲಿ ನಾನೆ ಇಲ್ಲವಾದೆ
ಮನಸಲ್ಲಿ ಹೊಸ ಭಾವ ಚಿಗುರೊಡೆದಿದೆ
ಅದು ಏನು ಅಂತ ನನಗೆ ತಿಳಿಯದಾಗಿದೆ
ಇದು ಮೋಹವೋ ಕಾಣೆ ನಾನು
ಪ್ರೀತಿಯೋ ಅರಿಯೆ ನಾನು
ಹೇಯ್ ಸೋನಿಯಾ ಇದು ಏನಂತ ನೀ ಹೇಳ್ತಿಯ...??

ಇರುಳಲ್ಲಿ ಚಂದಿರನನ್ನು ನಾ ನೋಡಿದೆ
ಅಲ್ಲಿಯೂ ನೀನೆ ಬಂದು ನನ್ನ ಕಾಡಿದೆ
ಚುಕ್ಕಿಗಳ ಸಾಲಿನಲ್ಲಿ ಮಿಂಚು ಕಂಡೆ
ಆ ಮಿಂಚು ನಿನ್ನ ನಗುವು ಬಂದು ನೋಡೇ

ನನ್ನ ಮನಸಲ್ಲು ನೀನೆ ಇರುವೆ
ಎಲ್ಲೋದ್ರು ಅಲ್ಲೇ ಬರುವೆ
ಹೇಯ್ ಸೋನಿಯಾ
ನನ್ನ್ಯಾಕೆ ನೀನು ಹೀಗ್ ಕಾಡ್ತ್ಹಿಯ..??

ನಾನು ನನ್ನಲ್ಲಿ ಇಲ್ಲ ಅಂತು
ನೀನೇನೆ ಎಲ್ಲ ಅಂತು
ನನ್ ಹೃದಯ
ಕೊಡ್ತಿಯೇನೆ ನಿನ್ ಹೃದಯ...!!

Thursday, February 7, 2008

ನನ್ನ ಪುಟ್ಟ ಪ್ರೀತಿ ಕತೆಯ ಹಾಡು

ಗಾಳಿಪಟ ಚಿತ್ರದ ಮಿಂಚಾಗಿ ನೀನು ಬರಲು ಹಾಡಿನ ರಾಗದಲ್ಲಿ....


ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ
ಅವಳುಸಿರ ತಂಪು ಗಾಳಿ
ನನ್ನುಸಿರ ಎದೆಯನು ಸೀಳಿ
ಕತೆಯನು ಮುಗಿಸಿದಳವಳಲ್ಲಿ

ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ

ನಾನೋಗೋ ದಾರೀಲಿ ಕಂಡೆ ಒಂದು ನಗುವನು
ಆ ನಗುವ ಮೊಗಕೆ ನಾ ಸೋತು ಸೋತು ಹೋದೆನು
ಆ ನಗುವಿನಿಂದಲೇ ನನ್ನ ಮುಂದಿನ ಜೀವನ
ಎಂದು ತಿಳಿದ ನನ್ನದು ಎಂಥ ದೊಡ್ಡ ದಡ್ಡತನ
ಅವಳಿಗೆ ನನ್ನನೇ ಅರ್ಪಿಸಿ ಸುಮ್ಮನೆ
ಇದ್ದ ನನ್ನ ಜೀವವನ್ನ ತೆಗೆದಳು ಜಾಣೆ

ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ

ನನ್ನ ಉಸಿರ ಉಸಿರಿನಲ್ಲಿ ಹಸಿರು ಆಗಿ ಇದ್ದಳವಳು
ಅಸುರ ಎಂದು ಹೆಸರು ಕೆಡಿಸಿ ಕೆಸರು ಎರಚಿ ಹೋದಳು
ಇಂಥ ಈ ವೇದನೆ ಹೇಳುವೆ ನಾ ನೊಂದು
ಚಂದಾ ಮಾಮ ಹೇಳೋ ತಂಪು ಮಾತ ಒಂದು

ಚಂದಮಾಮನೆ ಕೇಳೋ
ನನ್ನ ಪುಟ್ಟ ಪ್ರೀತಿ ಕತೆಯ
ಚಂದವಾದ ಹುಡುಗಿಯೊಂದು
ಹೃದಯ ಕೊಯ್ದು ಹೋದ ವ್ಯಥೆಯ
ಅವಳುಸಿರ ತಂಪು ಗಾಳಿ
ನನ್ನುಸಿರ ಎದೆಯನು ಸೀಳಿ
ಕತೆಯನು ಮುಗಿಸಿದಳವಳಲ್ಲಿ