ಒಂದು ನನ್ನ ಹೃದಯದಲ್ಲಿ
ಎರಡು ಅಕ್ಷರ ಪ್ರೀತಿ ಹುಟ್ಟಿ
ಮೂರು ಕ್ಷಣದಲಿ ಮನಸ ತುಂಬಿ
ನಾಲ್ಕು ಕಡೆಯಲು ಹರಡಿದೆ
ಐದು ನಿನ್ನ ಬೆರಳು ತಾಕಿ
ಆರು ದಳದ ಹೂವು ಅರಳಿ
ಏಳು ಸಾಗರ ದಾಟಿ ಸುಮವು
ಎಂಟು ದಿಕ್ಕಲು ಪಸರಿದೆ
ಒಂಭತ್ತಿರುವ ರಸಗಳೆಲ್ಲವು
ಹತ್ತೂರ ಸುತ್ತ ಮುತ್ತ
ಸುಳಿಯಲಾರದೆ ಕಳೆದು ಹೋಗಿವೆ
ನಿನ್ನ ಮೊಗದ ಕಾಂತಿಗೆ