ಹಿಂದಿಯ ಅವರಪನ್ ಚಿತ್ರದ "ಸ್ಟಾರ್ ಮಾಹಿಯ" ರಾಗದಲ್ಲಿ...
ನಾನು ನನ್ನಲ್ಲಿ ಇಲ್ಲ ಅಂತು
ನೀನೇನೆ ಎಲ್ಲ ಅಂತು
ನನ್ ಹೃದಯ
ಕೊಡ್ತಿಯೇನೆ ನಿನ್ ಹೃದಯ...!!
ನನ್ನ ಮನಸಲ್ಲು ನೀನೆ ಇರುವೆ
ಎಲ್ಲೋದ್ರು ಅಲ್ಲೇ ಬರುವೆ
ಹೇಯ್ ಸೋನಿಯಾ
ನನ್ನ್ಯಾಕೆ ನೀನು ಹೀಗ್ ಕಾಡ್ತ್ಹಿಯ..??
ನಿನ್ನನ್ನು ನೋಡೋ ಮೊದಲು ನಾ ನಾನಾಗಿದ್ದೆ
ಈಗೇಕೋ ನನ್ನಲಿ ನಾನೆ ಇಲ್ಲವಾದೆ
ಮನಸಲ್ಲಿ ಹೊಸ ಭಾವ ಚಿಗುರೊಡೆದಿದೆ
ಅದು ಏನು ಅಂತ ನನಗೆ ತಿಳಿಯದಾಗಿದೆ
ಇದು ಮೋಹವೋ ಕಾಣೆ ನಾನು
ಪ್ರೀತಿಯೋ ಅರಿಯೆ ನಾನು
ಹೇಯ್ ಸೋನಿಯಾ ಇದು ಏನಂತ ನೀ ಹೇಳ್ತಿಯ...??
ಇರುಳಲ್ಲಿ ಚಂದಿರನನ್ನು ನಾ ನೋಡಿದೆ
ಅಲ್ಲಿಯೂ ನೀನೆ ಬಂದು ನನ್ನ ಕಾಡಿದೆ
ಚುಕ್ಕಿಗಳ ಸಾಲಿನಲ್ಲಿ ಮಿಂಚು ಕಂಡೆ
ಆ ಮಿಂಚು ನಿನ್ನ ನಗುವು ಬಂದು ನೋಡೇ
ನನ್ನ ಮನಸಲ್ಲು ನೀನೆ ಇರುವೆ
ಎಲ್ಲೋದ್ರು ಅಲ್ಲೇ ಬರುವೆ
ಹೇಯ್ ಸೋನಿಯಾ
ನನ್ನ್ಯಾಕೆ ನೀನು ಹೀಗ್ ಕಾಡ್ತ್ಹಿಯ..??
ನಾನು ನನ್ನಲ್ಲಿ ಇಲ್ಲ ಅಂತು
ನೀನೇನೆ ಎಲ್ಲ ಅಂತು
ನನ್ ಹೃದಯ
ಕೊಡ್ತಿಯೇನೆ ನಿನ್ ಹೃದಯ...!!
Sunday, February 10, 2008
Subscribe to:
Post Comments (Atom)
4 comments:
ಎನ್ನೋದು ಕವನ ಬರೆಯುವಾಗ ಯಾವದೇ ಟ್ಯೂನ್ಗೆ ಸೀಮಿತವಾಗದ ರೀತಿಯಲ್ಲಿ ಬರಿಯೋದಿಕ್ಕೆ ಪ್ರಯತ್ನ ಪಡಿ ಇದಕ್ಕಿಂತ ಎನ್ನೋ ಚೆನ್ನಾಗಿರೊತ್ತೆ.
ಮುಂದೊರಿಲಿ ಚಂದ ಮಾಮನ ಕವನ.
ಸೋನಿಯಾ!!!!!!!!! ಬ್ಯಾಡ್ಲಾ! ಬೇರೆ ಯಾರಾದ್ರು ಇದ್ರೆ ಟ್ರೈ ಮಾಡು :)
ತುಂಬಾ ದೊಡ್ಡ ದೊಡ್ಡ ಯೋಚನೆ ಬೇಡ
ಸೋನಿಯಾ ಅಂದ್ರೆ ಚಿನ್ನದಂತ ಹುಡುಗಿ
mast:)
Post a Comment