Sunday, February 17, 2008

ಮಳೆಯಲ್ಲಿ ನೆನೆದ ಮನದಲ್ಲಿ ಮೂಡಿದ ಹಾಡು

ಆ ಹಾಡಿನ ರಾಗ ನನದೆ.. ಯಾವುದೇ ಗೀತೆಯ ರಾಗ ಇದಕ್ಕಿಲ್ಲ..

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ
ಮೈ ರೋಮವ ಪುಳಕಿಸೋ ನಿನ್ನಯ ಮಾಯೆ
ತಂದಿತು ನನ್ನಲಿ ಹೊಸ ತರ ಛಾಯೆ

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ

ಮುಂಗಾರಲ್ಲದ ದಿನಗಳಲ್ಲಿ
ಮುಸ್ಸಂಜೆಯ ಈ ಹೊತ್ತಿನಲ್ಲಿ
ಕುಣಿಯುತ್ತಿರುವ ನನ್ನ ಮನಸಿನಲ್ಲಿ
ಹಾಡುತ್ತಿರುವೆ ನೀ ಹನಿಯ ಚೆಲ್ಲಿ
ಅದು ಏನು ಅರಿಯೆ ನಿನ್ನ ಮಾಯೆ
ತುಂತುರು ಮಳೆ ರಾಯ
ನೀ ಮಾಡದಿರು ಗಾಯ

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ

ಹಸಿರು ಮರದ ಎಲೆಯಂಚಿನಲ್ಲಿ
ನಿನ್ನ ಹನಿಯ ರಂಗವಲ್ಲಿ
ಅದನು ವರ್ಣಿಸೋ ಪದಗಳೆಲ್ಲಿ
ಹುಡುಕುತಿರುವೆ ವ್ಯಾಕರಣದಲ್ಲಿ
ಮನಸಲ್ಲಿ ಸಂತಸ ಚಿಗುರು ಹೊಡೆದಿದೆ
ಅದನು ಬೆಳೆಸಯ್ಯ
ಅಳಿಸದಿರು ಮಾರಾಯ

ಹೇ ಹೇ ಹೇ ಹೇ ತುಂತುರು ಮಳೆಯೆ
ತುಂತುರು ಮಳೆಯೆ ತುಂತುತುರು ಮಳೆಯೆ
ಆ ಮೋಡದಿಂದ ಭೂಮಿಗಿಂದು ಇಳಿಯೆ
ತುಂತುರು ಮಳೆಯೆ ಭೂಮಿಗಿಂದು ಇಳಿಯೆ

4 comments:

Unknown said...

ತುಂತುರು ಮಳೆಯಲ್ಲಿ ನೆನೆದು ಕುಣಿದು ಕುಪ್ಪಲಿಸಿದ ನೆನಪು ಮನಸ್ಸಿಗೆ ಬರತ್ತೆ

ಸಂತೋಷಕುಮಾರ said...

ಏನೊ ಎಕತಾನತೆ ಅಂತ ಅನಿಸ್ತಪ್ಪಾ. ಯಾಕೆ ನೀನು ಸ್ವಲ್ಪ matured ವಿಷಯ ಆರಿಸ್ಕೊಬಾರದು ?

ಡಿ ಆರ್ ಮಧುಸೂದನ್ said...

Matured ವಿಷಯ ಮುಂದೆ ಬರುತ್ತೆ ನಿರೀಕ್ಷಿಸಿ

Gururaja Narayana said...

ನಮಸ್ಕಾರ ಮಧುಸೂದನ್, ನಿಮಗೊಂದು ಆಹ್ವಾನ ಪತ್ರಿಕೆ..

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

-ಕನ್ನಡಸಾಹಿತ್ಯ.ಕಾಂ ಬಳಗ

ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು