Thursday, July 26, 2012

ಒಂದರಿಂದ ಹತ್ತು ಹೀಗೂ ಇತ್ತು!

ಒಂದು ನನ್ನ ಹೃದಯದಲ್ಲಿ
ಎರಡು ಅಕ್ಷರ ಪ್ರೀತಿ ಹುಟ್ಟಿ
ಮೂರು ಕ್ಷಣದಲಿ ಮನಸ ತುಂಬಿ
 ನಾಲ್ಕು ಕಡೆಯಲು ಹರಡಿದೆ
 
ಐದು ನಿನ್ನ ಬೆರಳು ತಾಕಿ
ಆರು ದಳದ ಹೂವು ಅರಳಿ
ಏಳು ಸಾಗರ ದಾಟಿ ಸುಮವು
ಎಂಟು ದಿಕ್ಕಲು ಪಸರಿದೆ
 
ಒಂಭತ್ತಿರುವ ರಸಗಳೆಲ್ಲವು
ಹತ್ತೂರ ಸುತ್ತ ಮುತ್ತ
ಸುಳಿಯಲಾರದೆ ಕಳೆದು ಹೋಗಿವೆ
ನಿನ್ನ ಮೊಗದ ಕಾಂತಿಗೆ

2 comments:

Sunitha said...

ತುಂಬ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕವನ.. ಹಾಗೆ ಇನ್ನು ಸಹಸ್ರ ಕವನಗಳ ಅಪೇಕ್ಷೆ ಮತ್ತು ನೀರಿಕ್ಷೆ ನಿಮ್ಮ ಎಲ್ಲ ಅಭಿಮಾನಿಗಳಲ್ಲಿ ಇನ್ನು ಹಾಗೆ ಇದೆ....

ಡಿ ಆರ್ ಮಧುಸೂದನ್ said...

Thumba thumba thans sunitha :)